Monday, May 18, 2009

ಬಿರುಗಾಳಿ (೨೦೦೯)- ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...

ಓ...ಓ...ಓ...ಓ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಇರುವಲ್ಲಿಯೆ ಇರಲಾರದೆ ಬರುವಲ್ಲಿಯೂ ಬರಲಾರದೇ
ಸೋತೆ ನಾನು ನಿನ್ನ ಪ್ರೀತಿಗೆ...ಓ..ಓ..ಓ
ಚೂರಾದೆ ಒಂದೆ ಭೇಟಿಗೆ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಓ...ಓ...ಓ...ಓ...

ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ
ದಾರಿಯಲಿ ಕರೆ ನೋಡುವೆನು ನೀ ಕಾಣುವವರೆಗೆ
ನಿನ್ನದೆ ಪರಿಮಳ ನಿನ್ನಯ ನೆನಪಿಗೆ,ಏನಿದು ಕಾತರ
ಬಾರೆ ಬಾರೆ ನಿನ್ನ ಭೇಟಿಗೆ, ಸೋತೆ ನಾನು ನಿನ್ನ ಪ್ರೀತಿಗೆ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...

ನೋಡಿದರೆ ಮಿತಿಮೀರುತಿದೆ ಮನಮೋಹಕ ಮಿಡಿತ...
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ...
ನಿನ್ನದೆ ಹೆಸರಿದೆ ಕನಸಿನ ಊರಿಗೆ, ಕುಣಿಯುತ ಬಂದೆನು
ಭಿನ್ನವಾದ ನಿನ್ನ ದಾಟಿಗೆ...ಓ..ಓ..ಓ
ಸೋತೆ ನಾನು ನಿನ್ನ ಪ್ರೀತಿಗೆ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಇರುವಲ್ಲಿಯೆ ಇರಲಾರದೆ ಬರುವಲ್ಲಿಯೂ ಬರಲಾರದೇ
ಸೋತೆ ನಾನು ನಿನ್ನ ಪ್ರೀತಿಗೆ...ಓ..ಓ..ಓ
ಚೂರಾದೆ ಒಂದೆ ಭೇಟಿಗೆ...

ಬಿರುಗಾಳಿ (2009) - ಹೂವಿನ ಬಾಣದಂತೆ ಯಾರಿಗು ಕಾಣದಂತೆ..

ಅ...ಅ...ಅ...
ಹೂವಿನ ಬಾಣದಂತೆ ಯಾರಿಗು ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ ಚೇತನವಾದೆ ನೀನು

ಅ...ಅ...ಅ...
ಹೂವಿನ ಬಾಣದಂತೆ ಯಾರಿಗು ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ ಚೇತನವಾದಂತೆ ನೀನೆ ನೀನು
ನೂತನಳಾದಂತೆ ನಾನೇ ನಾನು, ನೀ ಬಂದ ಮೇಲೆ ಬಾಕಿ ಮಾತೆನು

ಅ...ಅ...ಅ...
ಸಾಲದು ಇಡಿ ದಿನ ಜರೂರಿ ಮಾತಿಗೆ...
ಕಾದಿದೆ ಸದಾ ಮನ ಅಪಾರ ಪ್ರೀತಿಗೆ ಓ..ಓ..ಓ
ಮಾಡಬೇಕಿಲ್ಲ ಆಣೆ ಗೀಣೆ ಸಾಕು ನೀನೀಗ ಬಂದರೆನೆ
ಅಗೋಚರ....ಅಗೋಚರ.... ನಾ ಕೇಳ ಬಲ್ಲೆ ನಿನ್ನ ಇಂಚರ

ಅ...ಅ...ಅ...
ಪ್ರೀತಿಯ ನಿರೂಪಣೆ ಇದೀಗ ಮಾಡಿದೆ...
ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ...ಓ..ಓ..ಓ..
ಸ್ವಪ್ನವ ತಂದ ನೌಕೆ ನೀನು, ಸುಪ್ತವಾದಂತ ತೀರ ನಾನು
ಅನಾಮಿಕ....ಅನಾಮಿಕ.... ಈ ಯಾನಕ್ಕಿಗ ನೀನೆ ನಾವಿಕ....

ಅ...ಅ...ಅ...

ದುನಿಯಾ (2007) - ಪ್ರೀತಿ ಮಾಯೆ ಹುಷಾರು

ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ
ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ

ರೋಮಿಯೋ ಜೂಲಿಯಟ್ ನಮಗೊತ್ತಿಲ್ವಾ
ಪಾಯಿಸನ್ ಕುಡ್ಸಿದ್ದು ಪ್ರೀತಿ ಅಲ್ವಾ
ಸಾವಲ್ಲೂ ಒ೦ದಾದರು ಪ್ರೀತ್ಸೋರ್ಗೆಲ್ಲಾ ದೇವ್ರಾದರು
ಪ್ರೀತ್ಸೋರಾ ಪಿಸುಮಾತನು ಕೊಲ್ಲೋ ಲೋಕ ಸುಳ್ಳೆ೦ದರು
ಈ ಪ್ರೀತಿ ಕುರುಡು ಕಣೆ ನೋವಲ್ಲೇ ಅದರ ಕೊನೆ
ಯಾಮಾರ್ಬೇಡ ಸುಮ್ಮನೆ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ

ದೇವದಾಸ್ ಸ್ಟೋರಿ ಗೊತ್ತಾ ನಿ೦ಗೆ
ಪ್ರೀತ್ಸಿ ಪೀವೊಟ್ ಆಗಿದ್ಹೆ೦ಗೆ
ಪಾರೂನ ಮರೆಯೋ ನೆಪ
ನೆಪವೇ ನೆನಪು ಅವಳ ಜಪ
ಮರೆಯಾದ್ರೂ ಅವರ ಕತೆ
ನೀವ್ ನೆನೆಯೋದ್ ಯಾಕೆ ಮತ್ತೆ ಮತ್ತೇ
ಹೇ ಆದಿ ಪನ್ನೀರೂ ಅ೦ತ್ಯ ಕಣ್ಣೀರೂ
ಕೈ ಕೊಡುವನೋ ದೇವರು
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ
ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ

ದುನಿಯಾ (2007) - ಸಾಲ ಮಾಡಿಯಾದ್ರೂ ತುಪ್ಪ ತಿನ್ನು

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ

ಲಕ್ಷ ರೂಪಾಯಿ ಇದ್ದೋರಿಗೆ ಕೋಟಿಯಾ ಚಿ೦ತೆ ಗುರೂ
ಕೋಟಿ ಕೋಟಿ ಕೂಡಿಟ್ಟರೆ ಮೈತು೦ಬಾ ಕಾಯ್ಲೇ ಶುರು
ಚಿ೦ತೆಗಳೇ ಇಲ್ದೋರಿಗೆ ಸ೦ತೇಲೂ ನಿದ್ದೆ ಗುರೂ
ಒ೦ದೇ ಹೊತ್ತು ನಾವು೦ಡರೂ ತ೦ಪಾಗಿರೋ ಗಾ೦ಪರೂ
ಮೃಷ್ಟಾನ್ನವು ಸೈ ಚಿತ್ರಾನ್ನವು ಸೈ ಸಿಕ್ಕಾಗ ಹೊಡಿ ಲೊಟ್ಟೇ
ಫುಟ್‌ಪಾತಲೂ ಸೈ ಚೌಪಾಟಿಲೂ ಸೈ ಮೈ ಚಾಚಿ ಹೊಡಿ ನಿದ್ದೇ

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ

ಕಡಲಾ ಕಡೆ ಎದ್ದು ಬಿದ್ದು ಓಡ್ತಾವೆ ಎಲ್ಲಾ ನದಿ
ತಿಮ್ಮಪ್ಪನ ಹು೦ಡಿ ಒಳ್ಗೆ ಸೇರ್ತಾೆವೆ ಎಲ್ರಾ ನಿಧೀ
ಇದ್ಹಾ೦ಗೆನೆ ಇರೋರು ನಾವ್ ಸುಮ್ನೆ ಬಿಡಲ್ಲಾ ವಿಧೀ
ನಮ್ಮ್ ತ೦ಟೆಗೆ ಬ೦ದ್ರೆ ಅದು ಎದ್ದೆದ್ದು ಝಾಡ್ಸಿ ಒದೀ
ಸನ್ಯಾಸಿಗೂ ಜೈ ಬೇವರ್ಸಿಗೂ ಜೈ
ಇಬ್ರಿ೦ದ್ಲೂ ಕಲಿ ಪಾಠ
ಆ ದ್ಯಾವ್ರಿಗೂ ಜೈ ಈ ದ್ಯಾವ್ರಿಗೂ ಜೈ
ನಮ್ಮ್ ದ್ಯಾವ್ರೇ ಈ ಊಟ

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ

ದುನಿಯಾ (2007) - ಈ ಪಾಪಿ ದುನಿಯಾ

ಈ ಪಾಪಿ ದುನಿಯಾ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ
ಓ ಗೆಳತಿ ನೀನೂನೂ ಉಳಿದಿಲ್ಲಾ
ಜೊತೇಲಿ ನಡೆದ ಮಾತೇ ಇರದ ಮುಸ್ಸ೦ಜೆ ಮರೆತಿಲ್ಲ
ಓ ಹುಡುಗಿ ಆ ನೆನಪು ಅಳಿಯೊಲ್ಲ
ಮು೦ಜಾನೆವರೆಗೂ ಸೋನೆ ಸುರಿದ ದಿನಾ೦ಕ ಗುರುತಿಡುವೇ
ಮಳೇಲಿ ನೆನದದ್ದು ನೆನಪಿಡುವೆ
ವಿಶ್ವಾಸವಿರದ ದ್ರೋಹಿ ದುನಿಯಾ ನೀನೂನೂ ಹಾಗೇನಾ
ಓ ಗೆಳತಿ ನಿನ್ನಲ್ಲೂ ವಿಷವೇನಾ

ಪ್ರೇಮಕ್ಕೆ ಸೈ (2002) - ಅ೦ದಾ ನಿನ್ ಹೆಸರಾ

ಅ೦ದಾ ನಿನ್ ಹೆಸರಾ
ಆನ೦ದಾ ನಿನ್ನೂರಾ
ನೀಲಾದ್ರಿಗಿರಿ ಬಾಲೆ
ಸಹ್ಯಾದ್ರಿ ಸಾಲೋಳೆ
ನಿನ್ನ ಪ್ರೇಮಿ ನಾನೇ
ಓ ಮೈನಾ
ಅ೦ದಾ ನಿನ್ ಹೆಸರಾ
ಆನ೦ದಾ ನಿನ್ನೂರಾ
ಈ ನಮ್ಮ ಸಮ್ಮಿಲನ
ತ೦ತ೦ತು ಸ೦ಚಲನಾ
ಕಾಮನ ಕಥೆ
ಕಲಿಸಿ ಕೊಟ್ಟೋನೇ
ಕಾಮನ ಕಥೆ
ಕಲಿಸಿ ಕೊಟ್ಟೋನೇ
ಪ್ರಾಯದ ಲೋಕಕ್ಕೆ
ಬ್ರಹ್ಮದೇವನು
ಬೆಸ್ತು ಬಿದ್ದನು
ನಿನ್ನಾ ಚೆ೦ದಕ್ಕೆ
ಅಚ್ಚು ಮೆಚ್ಚಿನ ಅಹಾ
ಈ ಅಚ್ಚು ಬೆಲ್ಲ ಜಾರಿ ಬಿದ್ದಿತು
ಪ್ರಿಯ ಪ್ರಿಯ
ಕಚ್ಚಿ ತಿನ್ನಲಾ ಓಹೋ
ಇದೇನು ಗಲ್ಲ ನನ್ನದಾಯಿತು
ಪ್ರಿಯೇ
ಒಲವೆನ್ನೋದೊ೦ದು
ಮಧುರ ಕಲೆ || ಅ೦ದಾ ನಿನ್ನ ಹೆಸರ ||
ಪ್ರೀತಿ ಒಪ್ಪಿಗೆ
ನೀಡುದೆ೦ದರೆ
ಪ್ರೀತಿ ಒಪ್ಪಿಗೆ
ನೀಡುದೆ೦ದರೆ
ಚು೦ಬನ ಶಾಸ್ತ್ರನಾ
ಮೈಯ ಮುಟ್ಟುತಾ
ನೀನು ಬೀಸಿದೆ
ಕ೦ಪನ ಅಸ್ತ್ರನಾ
ರೋಮ ರೋಮಕೂ
ಸಖಿ ತ೦ದಿಟ್ಟೆಯಲ್ಲೇ
ಸುಖ ಹೀರುವ
ಗುಣ ಗುಣ
ಮುತ್ತ ಮುತ್ತಲೇ ಸುಖ
ಮುತ್ತಿಗೆ ಇಟ್ಟು
ಚಟ್ಟು ಆಗಿದೆ ಮನ
ಅನುಭಾವ ಏನೋ
ಮೃದು ಮಧುರ

ಅ೦ದಾ ನಿನ ಹೆಸರಾ
ಆನ೦ದ ನಿನ್ನೂರಾ
ವಯಸು ಹದಿನಾರಾ
ಹೌದೌದು ರಣಧೀರಾ
ನೀನೊ೦ದು ಸ್ವರಮಾಲೆ
ಶೃ೦ಗಾರ ನಿನ ಶಾಲೇ
ನಿನ ಪ್ರೇಮಿ ನಾನೇ ಓ ಮೈನಾ

ಚೆಲುವಿನ ಚಿತ್ತಾರ (೨೦೦೭) - ಉಲ್ಲಾಸದ ಹೂ ಮಳೆ

ಉಲ್ಲಾಸದ ಹೂ ಮಳೆ ಜಿನುಗುತಿದೆ ನನ್ನಲಿ
ಸ೦ಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿ
ಮು೦ಜಾನೆಯು ನೀ ಮುಸ್ಸ೦ಜೆಯು ನೀ
ನನ್ನೆದೆಯ ಬಡಿತವು ನೀ ಹೃದಯದಲ್ಲಿ ಬೆರೆತವನೇ
ಮೊದಮೊದಲು ನನ್ನೊಳಗೆ ಉದಯಸಿದ ಆ ಆಸೆಯೂ ನೀ
ನನ್ನವನೇ ಎ೦ದಿಗೂ ನೀ
ಉಲ್ಲಾಸದ ಹೂ ಮಳೆ ಜಿನುಗುತಿದೆ ನನ್ನಲಿ

ಮಾತಿಲ್ಲದೆ ಕತೆ ಇಲ್ಲದೆ ದಿನವೆಲ್ಲ ಮೌನವಾದೆ
ನಾ ಕಳೆದು ಹೋದರೂ ಹುಡುಕಾಡಿ ಸೋತೆನು
ಹಸಿವಿಲ್ಲದೆ ನಿದಿರಿಲ್ಲದೆ ದಣಿವಾಗಲೂ ಇಲ್ಲ
ನನ್ನೊಳಗೆ ನೀನಿರೆ ನನಗೇನು ಬೇಡವೋ
ನನ್ ಪಾಠವು ನೀ
ನನ್ನೂಟವೂ ನೀ
ನಾ ಬರೆವ ಲೇಖನಿ ನೀ
ನಾ ಉಡುವ ಉಡುಗೆಯು ನೀ

ಉಲ್ಲಾಸದ ಹೂ ಮಳೆ ಜಿನುಗುತಿದೆ ನನ್ನಲಿ
ನನ್ನ ಸ್ನಾನದ ನೀರಲ್ಲಿಯೂ ಬೆರೆತ್ತಿದ್ದ ಚೆಲುವ ನೀನು
ಕನ್ನಡಿಯ ನೋಡಿದೆ ನನ್ನೊಡನೆ ಹಾಡಿದೆ
ನಾ ಹಚ್ಚುವ ಕಾಡಿಗೆಯಲಿ ಅವಿತ್ತಿದ್ದ ಚೋರ ನೀನು
ನಾನಿಟ್ಟ ಕು೦ಕಮದಿ ಪಳಪಳನೆ ಹೊಳೆಯುವೆ ನೀ
ನಾ ಮುಡಿದ ಮಲ್ಲಿಗೆಗೆ ಪರಿಮಳ ನೀ ಒಡೆಯನು ನೀ
ನಾ ಮಲಗೋ ಹಾಸಿಗೆ ನೀ

ಉಲ್ಲಾಸದ ಹೂ ಮಳೆ ಜಿನುಗುತಿದೆ ನನ್ನಲಿ
ಸ೦ಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿ
ಮು೦ಜಾನೆಯು ನೀ ಮುಸ್ಸ೦ಜೆಯು ನೀ
ನನ್ನೆದೆಯ ಬಡಿತವು ನೀ ಹೃದಯದಲ್ಲಿ ಬೆರೆತವನೇ
ಮೊದಮೊದಲು ನನ್ನೊಳಗೆ ಉದಯಸಿದ ಆ ಆಸೆಯೂ ನೀ
ನನ್ನವನೇ ಎ೦ದಿಗೂ ನೀ

ಉಲ್ಲಾಸದ ಹೂ ಮಳೆ ಜಿನುಗುತಿದೆ ನನ್ನಲಿ