ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ : ಎಸ್.ಪಿ.ಬಿ.
ಓ.... ಮೈ ಸನ್
ಅಮ್ಮನ ಆಸೆಯ ಆರತಿಯಾಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲ್ಲೊ೦ದಾಗು
ನಾಡಿನಾ ಒಳ್ಳೆಯ ಪ್ರಜೆಯಾಗು
ಓ.... ಮೈ ಸನ್
ಅಮ್ಮನ ಆಸೆಯ ಆರತಿಯಾಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲ್ಲೊ೦ದಾಗು
ನಾಡಿನ ಒಳ್ಳೆಯ ಪ್ರಜೆಯಾಗು
ಯಾರು ಹೆತ್ತರಯ್ಯ ಇ೦ಥ ಕ೦ದನನ್ನು
ಅ೦ಥ ಲೋಕ ಮೆಚ್ಚಬೇಕು ನಿನ್ನನ್ನು
ನಮ್ಮ ಆಶಾ ಗೋಪುರದ ಕಲಶವಾಗು
ವಿದ್ಯೆ ಎ೦ಬ ಖಡ್ಗವೊ೦ದು ತ೦ದೆ ಕೊಡುಗೆ
ವಿನಯ ಎ೦ಬ ಅಸ್ತ್ರವೊ೦ದು ತಾಯ ಕೊಡುಗೆ
ದ್ರೋಹಿ ಎ೦ಬ ಪಟ್ಟದಿ೦ದ ದೂರವಾಗು
ಕೋಪವೇ ಹಿ೦ಸೆಗೆ ಕಾರಣ
ಸಹನೆಯೇ ಬಾಳಿಗೆ ಭೂಷಣ
ಆವೇಶವನು ಜಯಿಸು
ಓ೦ ಸಹನಾಭವತು ಜಪಿಸು
ಓ.... ಮೈ ಸನ್
ಅಮ್ಮನ ಆಸೆಯ ಆರತಿಯಾಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲ್ಲೊ೦ದಾಗು
ನಾಡಿನ ಒಳ್ಳೆಯ ಪ್ರಜೆಯಾಗು
ನಿನ್ನ ಬಾಳಿಗೊ೦ದು ಪುಟ್ಟ ಗುರಿಯಿರಲಿ
ಸರಳ ರೇಖೆಯಲ್ಲಿ ದಿಟ್ಟ ನಡೆಯಿರಲಿ
ಅಕ್ಕಪಕ್ಕ ನೋಡದ೦ತೆ ನೀನು ಸಾಗು
ನಿನಗೆ ಮಾತ್ರವಲ್ಲ ನಿನಗಾಗೋ ನೋವು
ಪಾಲುದಾರರಯ್ಯ ನೋವಿನಲ್ಲೂ ನಾವು
ನೋವು ನೀಡದ೦ತ ಮುದ್ದು ಮಗನಾಗು
ಆತುರ ಪಟ್ಟರೆ ಆಪತ್ತು
ಮಾನವೇ ಸಜ್ಜನ ಸ೦ಪತ್ತು
ಅಹ೦ಕಾರವನ್ನು ತ್ಯಜಿಸು
ಓ೦ ಶಾ೦ತಿ ಶಾ೦ತಿ ಜಪಿಸು
ಓ.... ಮೈ ಸನ್
ಕನ್ನಡ ತಾಯಿಗೆ ಆರತಿಯಾದೆ
ಭಾರತ ಮಾತೆಯ ಕೀರುತಿಯಾದೆ
ನಾಡೇ ಮೆಚ್ಚುವ ಮಗನಾದೆ
ನಮ್ಮಾ ಎದೆಗೆ ಹಾಲೆರೆದೆ
ನನ್ನ ಮನೆ ನನ್ನ ಮಗ ಅ೦ದೆ ನಾನು
ನಮ್ಮ ನಾಡೇ ನನ್ನ ಮನೆ ಅ೦ದೆ ನೀನು
ನಿನ್ನ ಮನೆಯಲ್ಲಿ ನೀ ಚಿರಾಯುವಾದೆ
ಹಿ೦ಸೆಯನ್ನು ಸಹಿಸಬೇಕು ಅ೦ದೆ ನಾನು
ಸಹಿಸುವುದೇ ಅಪರಾಧ ಎ೦ದೆ ನೀನು
ಒಪ್ಪಿಕೊ೦ಡೆ ಕಿರಿಯರಿಗೆ ಗುರುವಾದೆ
ಸಾವಿರ ಎರಡು ಸಾವಿರ
ವರ್ಷದ ಮಹಾ ಮನ್ವ೦ತರ
ಈ ಧರೆಯು ಕಾಣಲಿದೆ
ಅಲ್ಲಿ ನಿನ್ನ ಮಾತು ಫಲಿಸಲಿದೆ
ಓ.... ಮೈ ಸನ್
ಕನ್ನಡ ತಾಯಿಗೆ ಆರತಿಯಾದೆ
ಭಾರತ ಮಾತೆಯ ಕೀರುತಿಯಾದೆ
ನಾಡೇ ಮೆಚ್ಚುವ ಮಗನಾದೆ
ನಮ್ಮಾ ಎದೆಗೆ ಹಾಲೆರೆದೆ
No comments:
Post a Comment