ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ : ಯೆಸುದಾಸ್ .ಕೆ.ಜ್
ಅಮ್ಮಾ......
ನಾನು ಕನ್ನಡದಾ ಕ೦ದ ಬ೦ದೆ ಶಾ೦ತಿಯ ಮಣ್ಣಿ೦ದ
ನಾನು ಕನ್ನಡದಾ ಕ೦ದ ಬ೦ದೆ ಶಾ೦ತಿಯ ಮಣ್ಣಿ೦ದ
ನಮ್ಮಮ್ಮಾ ಕನ್ನಡತಿ ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು ಸಹಬಾಳ್ವೆ ನಮ್ಮಾ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು
ಎದೆ ಹಾಲು೦ಟು ಎದೆ ಇರಿದವರ
ಕ್ಷಮಿಸುವುದು೦ಟೇ ಬೆಳೆಸುವುದು೦ಟೇ
ಬೇಲಿಗೆ ಮದ್ದು ಹಾಕದೇ ಇದ್ರೆ
ನೆರಳಿನ ಮರವು ಉಳಿಯುವುದು೦ಟೇ
ಅಮ್ಮಾ......
ನಾನು ಕನ್ನಡದಾ ಕ೦ದ
ಬ೦ದೆ ಶಾ೦ತಿಯ ಮಣ್ಣಿ೦ದ
ನಮ್ಮಮ್ಮಾ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮಾ ಒಡಲು
ನಿನ್ನ ಎದೆಯಾಳದ
ಈ ಪಲ್ಲವಿ ಬಿಡೆನು
ಭಾವದ ಎದೆತಾಳ
ಶೃತಿ ತಪ್ಪಲು ಬಿಡೆನು
ಜಾತಿಗಳಿಲ್ಲ ವರ್ಣಗಳಿಲ್ಲ
ಪ್ರೀತಿ ಪತಾಕೆ ಜಯಹೇ ನಿನಗೆ
ಶಾ೦ತಿಯ ಧ್ವಜವೇ ಕೀರ್ತಿಯ ಭುಜವೇ
ಧರ್ಮದ ಚಕ್ರ ವ೦ದನೆ ನಿನಗೆ
ಅಮ್ಮಾ......
ನಾನು ಕನ್ನಡದಾ ಕ೦ದ
ಬ೦ದೆ ಶಾ೦ತಿಯ ಮಣ್ಣಿ೦ದ
ನಮ್ಮಮ್ಮಾ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮಾ ಒಡಲು
ನಿನ್ನ ಎದೆಯಾಳದ
ಈ ಪಲ್ಲವಿ ಬಿಡೆನು
ಭಾವದ ಎದೆತಾಳ
ಶೃತಿ ತಪ್ಪಲು ಬಿಡೆನು
No comments:
Post a Comment