Monday, May 18, 2009

ಏ.ಕೆ. ೪೭ (1999) - ಯಾರೀ ಅ೦ಜುಬುರುಕಿ

ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ : ರಾಜೇಶ್ ಮತ್ತು ಚಿತ್ರ

ಯಾರೀ ಅ೦ಜುಬುರುಕಿ
ಯಾರೀ ಚೆ೦ಗುಲಾಬಿ
ಈ ಟ್ರಾಫಿಕ್ ತೋಟದಲ್ಲಿ
ಯಾರೀ ಅ೦ಜುಬುರುಕಿ
ಯಾರೀ ಬ್ಯೂಟಿ ಬೇಬಿ
ಈ ಕಾ೦ಕ್ರೀಟ್ ಕಾಡಿನಲ್ಲಿ
ಯಾರೀ ಅ೦ಜುಬುರುಕಿ
ಯಾರೀ ಚೆ೦ಗುಲಾಬಿ
ಈ ಟ್ರಾಫಿಕ್ ತೋಟದಲ್ಲಿ
ಯಾರೀ ಅ೦ಜುಬುರುಕಿ
ಯಾರೀ ಚ೦ದಿರ ಮುಖಿ
ಈ ಫುಟ್‌ಪಾತ್ ಸ೦ತೆಯಲ್ಲಿ
ಈ ಟ್ರಾಫಿಕ್ ತೋಟದಲ್ಲಿ

ಅಮ್ಮಾ ತುಳಸೀ
ತಾಯೇ ತುಳಸೀ
ನಮ್ಮ ಮನ ಮನೆ
ಕಾಯಮ್ಮ ಶ್ರೀ ತುಳಸೀ

ಯಾರೀ ಅ೦ಜುಬುರುಕಿ
ಯಾರೀ ಕನ್ನಡತಿ
ಈ ಹಿ೦ದಿ ಲೋಕದಲ್ಲಿ
ಯಾರೀ ಅ೦ಜುಬುರುಕಿ
ಯಾರೀ ಹಾಡುಗಾತಿ
ಈ ಪಾಪ್ ಸಾ೦ಗ್ ಮಧ್ಯದಲ್ಲಿ

ಹೃದಯದಾ ನನ್ನ ಟೇಪ್‌ರೆಕಾರ್ಡರ್ ಚಲಿಸಿದೆ
ಅವಳ ಕ೦ಠದ ರಾಗ ಮುದ್ರಣ ಮಾಡಿದೆ
ಅವಳ ಕಣ್ಣಿನ ಕ್ಯಾಮರಾ
ನನ್ ಫೋಟೋ ತೆಗೆದ ಹಾಗಿದೆ
ಯಾರೀ ಅ೦ಜುಬುರುಕಿ
ಯಾರೀ ಸರಳ ಸು೦ದರಿ
ನಮ್ ಪಕ್ಕದ ಮನೆಯಲ್ಲಿ

ಮನಸು ಸೆಳೆಯೋ ಮುಖಪುಟದಾತ ದ೦ಬಲಿ
ಒ೦ದೇ ಉಸಿರಲಿ ಓದಿ ಬಿಡುವ ಕುತೂಹಲ
ಕೈಗೆ ಸಿಗದ೦ತಾಗಿದೆ
ಅದು ಗಾಜಿನ ಮನೆಯಲ್ಲಿದೆ
ಯಾರೀ ಅ೦ಜುಬುರುಕಿ
ಯಾರೀ ಹೊನ್ನ ಜಿ೦ಕೆ
ನನ್ನ ಕಣ್ಣಿನ ಕಾಡಿನಲ್ಲಿ
ಯಾರೀ ಅ೦ಜುಬುರುಕಿ
ಯಾರೀ ಅನುಸೂಯೆ
ಈ ಜಲಸಿ ಲೋಕದಲ್ಲಿ

ಕೆ೦ಪು ಸೂರ್ಯನ ತಿಲಕ ಮಾಡಿ ತ೦ದರೆ
ನಿನ್ನ ಹಣೆಗೆ ಇಡುವೆನೆ೦ದು ಅ೦ದರೆ
ಹೂ ಅನ್ನುತ್ತಾಳೋ
ಹೆದರಿ ಊಹು೦ ಅನ್ನುತ್ತಾಳೋ
ಯಾರೀ ಅ೦ಜುಬುರುಕಿ
ಯಾರೀ ಮೌನಗೌರಿ
ನನ್ ಹಾರ್ಟಿನ ಕೋರ್ಟಲ್ಲಿ
ಯಾರೀ ಅ೦ಜುಬುರುಕಿ
ಯಾರೀ ವಿನಯವತಿ
ನಮ್ ಪಕ್ಕದ ಸೂರಿನಲ್ಲಿ

No comments:

Post a Comment