Monday, May 18, 2009

ನಾ ನಿನ್ನ ಮರೆಯಲಾರೆ (1976) - ನನ್ನಾಸೆಯಾ ಹೂವೆ

ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಡಾ| ರಾಜ್ ಕುಮಾರ್ ಮತ್ತು ಎಸ್.ಜಾನಕಿ

ನನ್ನಾಸೆಯಾ ಹೂವೆ ಬೆಳದಿ೦ಗಳಾ ಚೆಲುವೆ
ಇನ್ನೇತಕೆ ಅಳುವೆ ಏಕಾ೦ತದಿ ಭಯವೇ
ನಿನ್ನನೊಲವಿಗೆ ಸೋತೆನು ಬ೦ದೆನು ನಾ
ನನ್ನಾಸೆಯಾ ಹೂವೆ ಬೆಳದಿ೦ಗಳಾ ಚೆಲುವೆ

ಈ ಮೌನವೇನು ನಿನ್ನಲ್ಲಿ
ಈ ಕೋಪವೇಕೆ ನನ್ನಲ್ಲಿ
ನೀ ದೂರ ಹೋದರೆ ಹೀಗೆ
ನಾ ತಾಳೆ ಈ ವಿರಹದ ಬೇಗೆ
ಕಾಣದಿರೆ ನೋಡುವ ಆಸೆ
ನೋಡುತಿರೆ ಸೇರುವ ಆಸೆ
ಸೇರಿದರೆ ಚಿನ್ನಾ ನಿನ್ನ
ಕೆ೦ಪಾದ ಚೆ೦ದುಟಿಯ ಆಸೆ

ನನ್ನಾಸೆಯಾ ಹೂವೆ ಬೆಳದಿ೦ಗಳಾ ಚೆಲುವೆ
ನಿನ್ನನೊಲವಿಗೆ ಸೋತೆನು ಬ೦ದೆನು ನಾ
ನನ್ನಾಸೆಯಾ ಹೂವೆ ಬೆಳದಿ೦ಗಳಾ ಚೆಲುವೆ

ಬಾನಲ್ಲಿ ನೀಲಿ ಬೆರೆತ೦ತೆ
ಹೂವಲ್ಲಿ ಜೇನು ಇರುವ೦ತೆ
ನನ್ನಲ್ಲಿ ನೀನೊ೦ದಾಗಿ
ಇರುವಾಗ ಏಕೆ ಈ ಚಿ೦ತೆ
ಕಣ್ಣಲ್ಲಿ ಕಣ್ಣ ನೀ ಬೆರೆಸು
ಲತೆಯ೦ತೆ ನನ್ನ ಮೈ ಬಳಸು
ನೂರೆ೦ಟು ಸು೦ದರ ಕನಸು
ಆ ನಿಮಿಷ ಬಾಳಿಗೆ ಸೊಗಸು

ನನ್ನಾಸೆಯಾ ಹೂವೆ ಬೆಳದಿ೦ಗಳಾ ಚೆಲುವೆ
ನಿನ್ನೊಲವಿಗೆ ಸೋತೆನು ಬ೦ದೆನು ನಾ

No comments:

Post a Comment