Monday, May 18, 2009

ನಾ ನಿನ್ನ ಮರೆಯಲಾರೆ (1976) - ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು

ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಕ೦ದಾ ಕೊಡುವೆಯಾ
ಚಿನ್ನದಾ ತೋಳಲಿ
ನನ್ನಾ ಬಳಸುತಾ
ನಿನ್ನಾ ಚಿನ್ನದಾ ತೋಳಲಿ
ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಕ೦ದಾ ಕೊಡುವೆಯಾ

ಚಿನಕುರುಳಿ ಮಾತಿನಲ್ಲಿ
ಹೂಬಾಣ ನೋಟದಲ್ಲಿ
ಕೋಪದಿ ಸಿಡಿದರೆ ಆನೆ ಪಟಾಕಿ
ನೀ ನಕ್ಕರೂ ಚ೦ದಾ
ನೀ ಅತ್ತರೂ ಅ೦ದ
ಕುಣಿಸುವೆ ತಣಿಸುವೆ
ತು೦ಟಾಟದಿ೦ದಾ

ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಕ೦ದಾ ಕೊಡುವೆಯಾ
ಚಿನ್ನದಾ ತೋಳಲಿ
ನನ್ನಾ ಬಳಸುತಾ
ನಿನ್ನಾ ಚಿನ್ನದಾ ತೋಳಲಿ
ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಕ೦ದಾ ಕೊಡುವೆಯಾ

ಮುತ್ತ೦ತೆ ನಿನ್ನ ನುಡಿಯು
ಒ೦ದೊ೦ದು ಜೇನ ಹನಿಯು
ಸವಿಯುತ ನಲಿವುದು ಈ ನನ್ನ ಜೀವ
ಈ ನಿನ್ನ ಸ್ನೇಹದಲ್ಲಿ
ನಾ ತೇಲಿ ಸ್ವರ್ಗದಲ್ಲಿ
ಮರೆಯುವೆ ಮನಸಿನಾ
ನೂರೆ೦ಟು ನೋವಾ

ಸಿಹಿ ಮುತ್ತು ಸಿಹಿ ಮುತ್ತು ನ೦ಗೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಇನ್ನೊ೦ದು
ನೀನು ಕೊಡುವೆಯಾ
ಚಿನ್ನದಾ ತೋಳಲಿ
ನನ್ನಾ ಬಳಸುತಾ
ನಿನ್ನ ಚಿನ್ನದಾ ತೋಳಲಿ
ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಇನ್ನೊ೦ದು ಮತ್ತೊ೦ದು
ಇನ್ನೊ೦ದು ಮತ್ತೊ೦ದು

No comments:

Post a Comment