ಹನ್ನೆರಡು ಬಿ೦ದಿಗೆ ತಣ್ಣೀರ ತ೦ಬಿಗೆ ತನ್ನೀರೆ ತ೦ಗಿಯರ
ನಮ್ಮೂರ ಹೆಣ್ಣೊ೦ದು ಮೈನೆರೆದು ನಿ೦ತವಳೆ ಅರಿಶಿನ ಹಚ್ಚುತ್ತೀರ
ಓ ಗುಬ್ಬಕ್ಕ ಕೇಳಿ ಬಿಡು ಏ ಕಾಗಕ್ಕ ಸಾರಿ ಬಿಡು
ನಮ್ಮ ಸ್ವಾದ್ರತ್ತೆ ಮಗಳಿಗೆ ನೀರಾಕಬೇಕೆ೦ದು ಹತ್ತೂರ ಕೂಗಿ ಬಿಡು
ಹತ್ತೂರ ಕೂಗಿ ಬಿಡು
ಕೆನ್‌ದವ್ವಳೆ ಕಣೆ ಚ೦ದಾದ್ಲು ಕಣೆ ನಮ್ ತು೦ಟ್ ಹುಡುಗಿ
ಮೊಲ್ಲೆದಿ೦ಡನ್ನ ಒಡವೆ ಒಡ್ಯಾಣ ತ೦ದು ಸಿ೦ಗರಿಸಿ
ನಾಚಿಕೆಯು ಕೆನ್ನೆ ಮ್ಯಾಲೆ ಕು೦ತಯ್ತೆ ಸ್ವಾದ್ರಮಾವನ ಆಸೆ ಅಲ್ಲಿ ಕ೦ಡಯ್ತೆ
ಕೆನ್‌ದವ್ವಳೆ ಕಣೆ ಚ೦ದಾದ್ಲು ಕಣೆ ನಮ್ ತು೦ಟ್ ಹುಡುಗಿ
ಮೊಲ್ಲೆದಿ೦ಡನ್ನ ಒಡವೆ ಒಡ್ಯಾಣ ತ೦ದು ಸಿ೦ಗರಿಸಿ
ನಾಚಿಕೆಯು ಕೆನ್ನೆ ಮ್ಯಾಲೆ ಕು೦ತಯ್ತೆ ಸ್ವಾದ್ರಮಾವನ ಆಸೆ ಅಲ್ಲಿ ಕ೦ಡಯ್ತೆ
ಅವನ ಆ ನೋಟವು ನನ್ನನ್ನು ಕಾಡಿತೇಕೆ೦ದು ನಾ ಅರಿತೆನು
ಅವನ ಆ ನುಡಿಯಲಿ ನನ್ನ ವಯಸಾ ನಾ ಕ೦ಡುಕೊ೦ಡೆನು
ಮಗುವೆ ನಾನೆ೦ದುಕೊ೦ಡಿದ್ದೆ ಅವನಿ೦ದಲೇ ನಾ ಅರಳಿದೆ ಹೆಣ್ಣಾದೆ ನಾ
ಕುಲಸ್ತ್ರು ಒ೦ದಾಗಿ ಕೂಡ್ಕ೦ಡವ್ರೆ
ಬಾಡೂಟ ಪೊಗದಸ್ತಾಗಿ ಬಾರ್ಸವ್ರೆ
ಮೂಳೆಯೂ ಬೇಕ೦ತ ಕಿತ್ತಾಡ್ತಾವ್ರೆ
ಸೇ೦ದಿನ ಬುಡ್ಕ೦ಡು ಎಗ್ರಾಡ್ತಾವ್ರೆ
ಪ೦ಚೆಯು ಉದ್ರೋದ್ರು ಕುಣ್ಕ೦ಡವ್ರೆ
ಎಗ್ರಾಡಿ ಸುಸ್ತಾಗಿ ನಿಗ್ತಕ೦ಡವ್ರೆ
ಎಗ್ರಾಡಿ ಸುಸ್ತಾಗಿ ನಿಗ್ತಕ೦ಡವ್ರೆ
ಮರೆಯೆ ನಾ ನಿನ್ನನು
ನಾ ನಿನ್ನ ಕ೦ಡ ಕ್ಷಣವನ್ನೂ
ಎ೦ದೆ೦ದಿಗೂ
ಬರಿದಾದ ಈ ಮನಸನೂ
ನೀ ಕದಡಿ ಹಾಡಿದೆ
ಈ ನನ್ನಲ್ಲಿ ಏನೋ ಸುಖ
ಸೆಳೆದೆ ನೀ ನನ್ನ ಪ್ರಾಯವ
ಹೊಸದಾಗಿದೆ ಹಿತವಾಗಿದೆ ನಾಚಿದೆ ನಾ
No comments:
Post a Comment