Monday, May 18, 2009

ಬಿರುಗಾಳಿ (೨೦೦೯)- ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...

ಓ...ಓ...ಓ...ಓ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಇರುವಲ್ಲಿಯೆ ಇರಲಾರದೆ ಬರುವಲ್ಲಿಯೂ ಬರಲಾರದೇ
ಸೋತೆ ನಾನು ನಿನ್ನ ಪ್ರೀತಿಗೆ...ಓ..ಓ..ಓ
ಚೂರಾದೆ ಒಂದೆ ಭೇಟಿಗೆ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಓ...ಓ...ಓ...ಓ...

ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ
ದಾರಿಯಲಿ ಕರೆ ನೋಡುವೆನು ನೀ ಕಾಣುವವರೆಗೆ
ನಿನ್ನದೆ ಪರಿಮಳ ನಿನ್ನಯ ನೆನಪಿಗೆ,ಏನಿದು ಕಾತರ
ಬಾರೆ ಬಾರೆ ನಿನ್ನ ಭೇಟಿಗೆ, ಸೋತೆ ನಾನು ನಿನ್ನ ಪ್ರೀತಿಗೆ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...

ನೋಡಿದರೆ ಮಿತಿಮೀರುತಿದೆ ಮನಮೋಹಕ ಮಿಡಿತ...
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ...
ನಿನ್ನದೆ ಹೆಸರಿದೆ ಕನಸಿನ ಊರಿಗೆ, ಕುಣಿಯುತ ಬಂದೆನು
ಭಿನ್ನವಾದ ನಿನ್ನ ದಾಟಿಗೆ...ಓ..ಓ..ಓ
ಸೋತೆ ನಾನು ನಿನ್ನ ಪ್ರೀತಿಗೆ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಇರುವಲ್ಲಿಯೆ ಇರಲಾರದೆ ಬರುವಲ್ಲಿಯೂ ಬರಲಾರದೇ
ಸೋತೆ ನಾನು ನಿನ್ನ ಪ್ರೀತಿಗೆ...ಓ..ಓ..ಓ
ಚೂರಾದೆ ಒಂದೆ ಭೇಟಿಗೆ...

No comments:

Post a Comment