Monday, May 18, 2009

ಬಿರುಗಾಳಿ (2009) - ಹೂವಿನ ಬಾಣದಂತೆ ಯಾರಿಗು ಕಾಣದಂತೆ..

ಅ...ಅ...ಅ...
ಹೂವಿನ ಬಾಣದಂತೆ ಯಾರಿಗು ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ ಚೇತನವಾದೆ ನೀನು

ಅ...ಅ...ಅ...
ಹೂವಿನ ಬಾಣದಂತೆ ಯಾರಿಗು ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ ಚೇತನವಾದಂತೆ ನೀನೆ ನೀನು
ನೂತನಳಾದಂತೆ ನಾನೇ ನಾನು, ನೀ ಬಂದ ಮೇಲೆ ಬಾಕಿ ಮಾತೆನು

ಅ...ಅ...ಅ...
ಸಾಲದು ಇಡಿ ದಿನ ಜರೂರಿ ಮಾತಿಗೆ...
ಕಾದಿದೆ ಸದಾ ಮನ ಅಪಾರ ಪ್ರೀತಿಗೆ ಓ..ಓ..ಓ
ಮಾಡಬೇಕಿಲ್ಲ ಆಣೆ ಗೀಣೆ ಸಾಕು ನೀನೀಗ ಬಂದರೆನೆ
ಅಗೋಚರ....ಅಗೋಚರ.... ನಾ ಕೇಳ ಬಲ್ಲೆ ನಿನ್ನ ಇಂಚರ

ಅ...ಅ...ಅ...
ಪ್ರೀತಿಯ ನಿರೂಪಣೆ ಇದೀಗ ಮಾಡಿದೆ...
ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ...ಓ..ಓ..ಓ..
ಸ್ವಪ್ನವ ತಂದ ನೌಕೆ ನೀನು, ಸುಪ್ತವಾದಂತ ತೀರ ನಾನು
ಅನಾಮಿಕ....ಅನಾಮಿಕ.... ಈ ಯಾನಕ್ಕಿಗ ನೀನೆ ನಾವಿಕ....

ಅ...ಅ...ಅ...

No comments:

Post a Comment