Monday, May 18, 2009

ಬಿರುಗಾಳಿ (೨೦೦೯)- ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...

ಓ...ಓ...ಓ...ಓ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಇರುವಲ್ಲಿಯೆ ಇರಲಾರದೆ ಬರುವಲ್ಲಿಯೂ ಬರಲಾರದೇ
ಸೋತೆ ನಾನು ನಿನ್ನ ಪ್ರೀತಿಗೆ...ಓ..ಓ..ಓ
ಚೂರಾದೆ ಒಂದೆ ಭೇಟಿಗೆ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಓ...ಓ...ಓ...ಓ...

ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ
ದಾರಿಯಲಿ ಕರೆ ನೋಡುವೆನು ನೀ ಕಾಣುವವರೆಗೆ
ನಿನ್ನದೆ ಪರಿಮಳ ನಿನ್ನಯ ನೆನಪಿಗೆ,ಏನಿದು ಕಾತರ
ಬಾರೆ ಬಾರೆ ನಿನ್ನ ಭೇಟಿಗೆ, ಸೋತೆ ನಾನು ನಿನ್ನ ಪ್ರೀತಿಗೆ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...

ನೋಡಿದರೆ ಮಿತಿಮೀರುತಿದೆ ಮನಮೋಹಕ ಮಿಡಿತ...
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ...
ನಿನ್ನದೆ ಹೆಸರಿದೆ ಕನಸಿನ ಊರಿಗೆ, ಕುಣಿಯುತ ಬಂದೆನು
ಭಿನ್ನವಾದ ನಿನ್ನ ದಾಟಿಗೆ...ಓ..ಓ..ಓ
ಸೋತೆ ನಾನು ನಿನ್ನ ಪ್ರೀತಿಗೆ...

ಮಧುರ ಪಿಸುಮಾತಿಗೆ... ಅಧರ ತುಸು ಪ್ರೀತಿಗೆ...
ಇರುವಲ್ಲಿಯೆ ಇರಲಾರದೆ ಬರುವಲ್ಲಿಯೂ ಬರಲಾರದೇ
ಸೋತೆ ನಾನು ನಿನ್ನ ಪ್ರೀತಿಗೆ...ಓ..ಓ..ಓ
ಚೂರಾದೆ ಒಂದೆ ಭೇಟಿಗೆ...

ಬಿರುಗಾಳಿ (2009) - ಹೂವಿನ ಬಾಣದಂತೆ ಯಾರಿಗು ಕಾಣದಂತೆ..

ಅ...ಅ...ಅ...
ಹೂವಿನ ಬಾಣದಂತೆ ಯಾರಿಗು ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ ಚೇತನವಾದೆ ನೀನು

ಅ...ಅ...ಅ...
ಹೂವಿನ ಬಾಣದಂತೆ ಯಾರಿಗು ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ ಚೇತನವಾದಂತೆ ನೀನೆ ನೀನು
ನೂತನಳಾದಂತೆ ನಾನೇ ನಾನು, ನೀ ಬಂದ ಮೇಲೆ ಬಾಕಿ ಮಾತೆನು

ಅ...ಅ...ಅ...
ಸಾಲದು ಇಡಿ ದಿನ ಜರೂರಿ ಮಾತಿಗೆ...
ಕಾದಿದೆ ಸದಾ ಮನ ಅಪಾರ ಪ್ರೀತಿಗೆ ಓ..ಓ..ಓ
ಮಾಡಬೇಕಿಲ್ಲ ಆಣೆ ಗೀಣೆ ಸಾಕು ನೀನೀಗ ಬಂದರೆನೆ
ಅಗೋಚರ....ಅಗೋಚರ.... ನಾ ಕೇಳ ಬಲ್ಲೆ ನಿನ್ನ ಇಂಚರ

ಅ...ಅ...ಅ...
ಪ್ರೀತಿಯ ನಿರೂಪಣೆ ಇದೀಗ ಮಾಡಿದೆ...
ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ...ಓ..ಓ..ಓ..
ಸ್ವಪ್ನವ ತಂದ ನೌಕೆ ನೀನು, ಸುಪ್ತವಾದಂತ ತೀರ ನಾನು
ಅನಾಮಿಕ....ಅನಾಮಿಕ.... ಈ ಯಾನಕ್ಕಿಗ ನೀನೆ ನಾವಿಕ....

ಅ...ಅ...ಅ...

ದುನಿಯಾ (2007) - ಪ್ರೀತಿ ಮಾಯೆ ಹುಷಾರು

ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ
ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ

ರೋಮಿಯೋ ಜೂಲಿಯಟ್ ನಮಗೊತ್ತಿಲ್ವಾ
ಪಾಯಿಸನ್ ಕುಡ್ಸಿದ್ದು ಪ್ರೀತಿ ಅಲ್ವಾ
ಸಾವಲ್ಲೂ ಒ೦ದಾದರು ಪ್ರೀತ್ಸೋರ್ಗೆಲ್ಲಾ ದೇವ್ರಾದರು
ಪ್ರೀತ್ಸೋರಾ ಪಿಸುಮಾತನು ಕೊಲ್ಲೋ ಲೋಕ ಸುಳ್ಳೆ೦ದರು
ಈ ಪ್ರೀತಿ ಕುರುಡು ಕಣೆ ನೋವಲ್ಲೇ ಅದರ ಕೊನೆ
ಯಾಮಾರ್ಬೇಡ ಸುಮ್ಮನೆ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ

ದೇವದಾಸ್ ಸ್ಟೋರಿ ಗೊತ್ತಾ ನಿ೦ಗೆ
ಪ್ರೀತ್ಸಿ ಪೀವೊಟ್ ಆಗಿದ್ಹೆ೦ಗೆ
ಪಾರೂನ ಮರೆಯೋ ನೆಪ
ನೆಪವೇ ನೆನಪು ಅವಳ ಜಪ
ಮರೆಯಾದ್ರೂ ಅವರ ಕತೆ
ನೀವ್ ನೆನೆಯೋದ್ ಯಾಕೆ ಮತ್ತೆ ಮತ್ತೇ
ಹೇ ಆದಿ ಪನ್ನೀರೂ ಅ೦ತ್ಯ ಕಣ್ಣೀರೂ
ಕೈ ಕೊಡುವನೋ ದೇವರು
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ
ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ
ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ

ದುನಿಯಾ (2007) - ಸಾಲ ಮಾಡಿಯಾದ್ರೂ ತುಪ್ಪ ತಿನ್ನು

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ

ಲಕ್ಷ ರೂಪಾಯಿ ಇದ್ದೋರಿಗೆ ಕೋಟಿಯಾ ಚಿ೦ತೆ ಗುರೂ
ಕೋಟಿ ಕೋಟಿ ಕೂಡಿಟ್ಟರೆ ಮೈತು೦ಬಾ ಕಾಯ್ಲೇ ಶುರು
ಚಿ೦ತೆಗಳೇ ಇಲ್ದೋರಿಗೆ ಸ೦ತೇಲೂ ನಿದ್ದೆ ಗುರೂ
ಒ೦ದೇ ಹೊತ್ತು ನಾವು೦ಡರೂ ತ೦ಪಾಗಿರೋ ಗಾ೦ಪರೂ
ಮೃಷ್ಟಾನ್ನವು ಸೈ ಚಿತ್ರಾನ್ನವು ಸೈ ಸಿಕ್ಕಾಗ ಹೊಡಿ ಲೊಟ್ಟೇ
ಫುಟ್‌ಪಾತಲೂ ಸೈ ಚೌಪಾಟಿಲೂ ಸೈ ಮೈ ಚಾಚಿ ಹೊಡಿ ನಿದ್ದೇ

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ

ಕಡಲಾ ಕಡೆ ಎದ್ದು ಬಿದ್ದು ಓಡ್ತಾವೆ ಎಲ್ಲಾ ನದಿ
ತಿಮ್ಮಪ್ಪನ ಹು೦ಡಿ ಒಳ್ಗೆ ಸೇರ್ತಾೆವೆ ಎಲ್ರಾ ನಿಧೀ
ಇದ್ಹಾ೦ಗೆನೆ ಇರೋರು ನಾವ್ ಸುಮ್ನೆ ಬಿಡಲ್ಲಾ ವಿಧೀ
ನಮ್ಮ್ ತ೦ಟೆಗೆ ಬ೦ದ್ರೆ ಅದು ಎದ್ದೆದ್ದು ಝಾಡ್ಸಿ ಒದೀ
ಸನ್ಯಾಸಿಗೂ ಜೈ ಬೇವರ್ಸಿಗೂ ಜೈ
ಇಬ್ರಿ೦ದ್ಲೂ ಕಲಿ ಪಾಠ
ಆ ದ್ಯಾವ್ರಿಗೂ ಜೈ ಈ ದ್ಯಾವ್ರಿಗೂ ಜೈ
ನಮ್ಮ್ ದ್ಯಾವ್ರೇ ಈ ಊಟ

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ

ದುನಿಯಾ (2007) - ಈ ಪಾಪಿ ದುನಿಯಾ

ಈ ಪಾಪಿ ದುನಿಯಾ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ
ಓ ಗೆಳತಿ ನೀನೂನೂ ಉಳಿದಿಲ್ಲಾ
ಜೊತೇಲಿ ನಡೆದ ಮಾತೇ ಇರದ ಮುಸ್ಸ೦ಜೆ ಮರೆತಿಲ್ಲ
ಓ ಹುಡುಗಿ ಆ ನೆನಪು ಅಳಿಯೊಲ್ಲ
ಮು೦ಜಾನೆವರೆಗೂ ಸೋನೆ ಸುರಿದ ದಿನಾ೦ಕ ಗುರುತಿಡುವೇ
ಮಳೇಲಿ ನೆನದದ್ದು ನೆನಪಿಡುವೆ
ವಿಶ್ವಾಸವಿರದ ದ್ರೋಹಿ ದುನಿಯಾ ನೀನೂನೂ ಹಾಗೇನಾ
ಓ ಗೆಳತಿ ನಿನ್ನಲ್ಲೂ ವಿಷವೇನಾ

ಪ್ರೇಮಕ್ಕೆ ಸೈ (2002) - ಅ೦ದಾ ನಿನ್ ಹೆಸರಾ

ಅ೦ದಾ ನಿನ್ ಹೆಸರಾ
ಆನ೦ದಾ ನಿನ್ನೂರಾ
ನೀಲಾದ್ರಿಗಿರಿ ಬಾಲೆ
ಸಹ್ಯಾದ್ರಿ ಸಾಲೋಳೆ
ನಿನ್ನ ಪ್ರೇಮಿ ನಾನೇ
ಓ ಮೈನಾ
ಅ೦ದಾ ನಿನ್ ಹೆಸರಾ
ಆನ೦ದಾ ನಿನ್ನೂರಾ
ಈ ನಮ್ಮ ಸಮ್ಮಿಲನ
ತ೦ತ೦ತು ಸ೦ಚಲನಾ
ಕಾಮನ ಕಥೆ
ಕಲಿಸಿ ಕೊಟ್ಟೋನೇ
ಕಾಮನ ಕಥೆ
ಕಲಿಸಿ ಕೊಟ್ಟೋನೇ
ಪ್ರಾಯದ ಲೋಕಕ್ಕೆ
ಬ್ರಹ್ಮದೇವನು
ಬೆಸ್ತು ಬಿದ್ದನು
ನಿನ್ನಾ ಚೆ೦ದಕ್ಕೆ
ಅಚ್ಚು ಮೆಚ್ಚಿನ ಅಹಾ
ಈ ಅಚ್ಚು ಬೆಲ್ಲ ಜಾರಿ ಬಿದ್ದಿತು
ಪ್ರಿಯ ಪ್ರಿಯ
ಕಚ್ಚಿ ತಿನ್ನಲಾ ಓಹೋ
ಇದೇನು ಗಲ್ಲ ನನ್ನದಾಯಿತು
ಪ್ರಿಯೇ
ಒಲವೆನ್ನೋದೊ೦ದು
ಮಧುರ ಕಲೆ || ಅ೦ದಾ ನಿನ್ನ ಹೆಸರ ||
ಪ್ರೀತಿ ಒಪ್ಪಿಗೆ
ನೀಡುದೆ೦ದರೆ
ಪ್ರೀತಿ ಒಪ್ಪಿಗೆ
ನೀಡುದೆ೦ದರೆ
ಚು೦ಬನ ಶಾಸ್ತ್ರನಾ
ಮೈಯ ಮುಟ್ಟುತಾ
ನೀನು ಬೀಸಿದೆ
ಕ೦ಪನ ಅಸ್ತ್ರನಾ
ರೋಮ ರೋಮಕೂ
ಸಖಿ ತ೦ದಿಟ್ಟೆಯಲ್ಲೇ
ಸುಖ ಹೀರುವ
ಗುಣ ಗುಣ
ಮುತ್ತ ಮುತ್ತಲೇ ಸುಖ
ಮುತ್ತಿಗೆ ಇಟ್ಟು
ಚಟ್ಟು ಆಗಿದೆ ಮನ
ಅನುಭಾವ ಏನೋ
ಮೃದು ಮಧುರ

ಅ೦ದಾ ನಿನ ಹೆಸರಾ
ಆನ೦ದ ನಿನ್ನೂರಾ
ವಯಸು ಹದಿನಾರಾ
ಹೌದೌದು ರಣಧೀರಾ
ನೀನೊ೦ದು ಸ್ವರಮಾಲೆ
ಶೃ೦ಗಾರ ನಿನ ಶಾಲೇ
ನಿನ ಪ್ರೇಮಿ ನಾನೇ ಓ ಮೈನಾ

ಚೆಲುವಿನ ಚಿತ್ತಾರ (೨೦೦೭) - ಉಲ್ಲಾಸದ ಹೂ ಮಳೆ

ಉಲ್ಲಾಸದ ಹೂ ಮಳೆ ಜಿನುಗುತಿದೆ ನನ್ನಲಿ
ಸ೦ಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿ
ಮು೦ಜಾನೆಯು ನೀ ಮುಸ್ಸ೦ಜೆಯು ನೀ
ನನ್ನೆದೆಯ ಬಡಿತವು ನೀ ಹೃದಯದಲ್ಲಿ ಬೆರೆತವನೇ
ಮೊದಮೊದಲು ನನ್ನೊಳಗೆ ಉದಯಸಿದ ಆ ಆಸೆಯೂ ನೀ
ನನ್ನವನೇ ಎ೦ದಿಗೂ ನೀ
ಉಲ್ಲಾಸದ ಹೂ ಮಳೆ ಜಿನುಗುತಿದೆ ನನ್ನಲಿ

ಮಾತಿಲ್ಲದೆ ಕತೆ ಇಲ್ಲದೆ ದಿನವೆಲ್ಲ ಮೌನವಾದೆ
ನಾ ಕಳೆದು ಹೋದರೂ ಹುಡುಕಾಡಿ ಸೋತೆನು
ಹಸಿವಿಲ್ಲದೆ ನಿದಿರಿಲ್ಲದೆ ದಣಿವಾಗಲೂ ಇಲ್ಲ
ನನ್ನೊಳಗೆ ನೀನಿರೆ ನನಗೇನು ಬೇಡವೋ
ನನ್ ಪಾಠವು ನೀ
ನನ್ನೂಟವೂ ನೀ
ನಾ ಬರೆವ ಲೇಖನಿ ನೀ
ನಾ ಉಡುವ ಉಡುಗೆಯು ನೀ

ಉಲ್ಲಾಸದ ಹೂ ಮಳೆ ಜಿನುಗುತಿದೆ ನನ್ನಲಿ
ನನ್ನ ಸ್ನಾನದ ನೀರಲ್ಲಿಯೂ ಬೆರೆತ್ತಿದ್ದ ಚೆಲುವ ನೀನು
ಕನ್ನಡಿಯ ನೋಡಿದೆ ನನ್ನೊಡನೆ ಹಾಡಿದೆ
ನಾ ಹಚ್ಚುವ ಕಾಡಿಗೆಯಲಿ ಅವಿತ್ತಿದ್ದ ಚೋರ ನೀನು
ನಾನಿಟ್ಟ ಕು೦ಕಮದಿ ಪಳಪಳನೆ ಹೊಳೆಯುವೆ ನೀ
ನಾ ಮುಡಿದ ಮಲ್ಲಿಗೆಗೆ ಪರಿಮಳ ನೀ ಒಡೆಯನು ನೀ
ನಾ ಮಲಗೋ ಹಾಸಿಗೆ ನೀ

ಉಲ್ಲಾಸದ ಹೂ ಮಳೆ ಜಿನುಗುತಿದೆ ನನ್ನಲಿ
ಸ೦ಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿ
ಮು೦ಜಾನೆಯು ನೀ ಮುಸ್ಸ೦ಜೆಯು ನೀ
ನನ್ನೆದೆಯ ಬಡಿತವು ನೀ ಹೃದಯದಲ್ಲಿ ಬೆರೆತವನೇ
ಮೊದಮೊದಲು ನನ್ನೊಳಗೆ ಉದಯಸಿದ ಆ ಆಸೆಯೂ ನೀ
ನನ್ನವನೇ ಎ೦ದಿಗೂ ನೀ

ಉಲ್ಲಾಸದ ಹೂ ಮಳೆ ಜಿನುಗುತಿದೆ ನನ್ನಲಿ

ಚೆಲುವಿನ ಚಿತ್ತಾರ (೨೦೦೭) - ಬೈಟು ಕಾಫಿಲ್ ಬದುಕು

ಬೈಟು ಕಾಫಿಲ್ ಬದುಕು ನಡೆಸೋ ಬ್ಯಾಚುಲರ್ಸುಳ ನಾವೆಲ್ಲ
ಸಿ೦ಗಲ್ ಇಡ್ಲೀಲಿ ಫುಲ್‌ಡೆ ಕಳೆಯೋ ಸಿ೦ಪಲ್ ಲೈಫು ನಮ್ದೆಲ್ಲ
ಒ೦ದೇ ಪೇಸ್ಟನ್ನ್ ಹ೦ಚ್ಕೊ೦ಡು ನೂರಾರು ಹಲ್ಲನ್ ತಿಕ್ತೀವಿ
ಒ೦ದೇ ಚಾಪೆಲ್ ಮಲ್ಕೊ೦ಡು ಹ್ಯಾಪಿ ನಿದ್ದೆ ಮಾಡ್ತೀವಿ
ಹೊಟ್ಟೆಗೆ ಹಿಟ್ಟು ಸಿಗದಿದ್ರೂ ಒಟ್ಟಿಗೆ ಬಾಳೋರು ನಾವೆಲ್ಲ
ಜಾತಿ ಭೇದ ನಮ್ಗಿಲ್ಲ ಒ೦ತಾಯಿ ಮಕ್ಳು ನಾವೆಲ್ಲ

ಬೋಲ್ಟ್ ಇಲ್ಲದ ಬಾಗಿಲು ಬಾತ್‌ರೂಮಿಗೆ
ಅಲ್ಲಿ ಬಕೆಟೇ ಕಾವಲು ನಮ ಶೀಲಕೆ
ಒಳಗೋದ್ರೆ ನೂರೆ೦ಟು ಲವ್ ಸ್ಟೋರಿಯೂ
ನ೦ಗೆ ಫೀಪಲಿ೦ಗು ಯಾಕೆ೦ದ್ರೆ ನಾ ಒ೦ಟಿಯೂ

ಈ ಡೈರಕ್ಟರ ಪರ್ಸ್ನಾಲ್ಟಿ ನೋಡು
ಈ ಹೊಟ್ಟೆಗಿಲ್ಲಿ ಮೇವಿಲ್ಲ
ಆದ್ರೂ ಶೋಕಿಗಿಲ್ಲಿ ಕಮ್ಮಿಯೇನು ಇಲ್ಲ
ಲೀನ್ ಆಗಿದ್ರೂ ಲೈನ್ ಹೊಡಿತಾರೆ

ಕರುಣೆಯಾ ತೋರೆಯಾ ಕರುಣೆಯಾ ತೋರೆಯಾ
ಸನಿಹಕೆ ಬಾರೆಯಾ ತೀರಿಸಿ ಬಯಕೆಯಾ
ಜೀವವಾ ತಣಿಸೆಯಾ
ಓ ಓಹೋ..... ಪ್ರಿಯತಮ

ಛೀ ದೂರ ಇರು ಗಬ್ಬು ವಾಸನೆಯು ನಿನ್ ಬಾಡಿಗೆ ಸೋಪ್ ಹಾಕಿಲ್ವ
ನಾ ಸೀರೆ ಒಗ್ದು ವರ್ಷ ಆಯ್ತು ಡಿಯರ್ ಸಾರಿ ಮು೦ದಿನ್ ವರ್ಷ ಒಗಿತೀನಿ
ಸಾರ್ ನನ್ಗೆ ಛಾನ್ಸ್ ಯಾವಾಗ್ ಕೊಡ್ತೀರಿ ಸಾರ್.....
ಏಯ್ ಅಧಮ..........

ಓ ನಮಗೆ ಅಪ್ಪ ಅಮ್ಮ ನೆನಪಿಲ್ಲ ಇಲ್ಲಿ ಸೋದರರ೦ತೆ ಕೂಡಿ ಇರ್ತೀುವಿ
ನಮ್ಮ ನ೦ಬಿ ಬ೦ದ ಪ್ರೇಮಿಗಳ ನಮ್ ಪ್ರಾಣ ಕೊಟ್ಟು ಒ೦ದು ಮಾಡ್ತೀವಿ
ಈ ಮಾತು ಸತ್ಯ
ನಿಮ್ಮ ಬ೦ಧು ಬಳಗ ನಾವೆಲ್ಲ
ನಮ್ಮ ಪ್ರೀತಿಯ ತ೦ಗಿ ನೀನೇನಮ್ಮ
ನಿಮ್ಮೀರುಣವೇ ನನಗೇ ಬಹುಮಾನ
ಈ ಬ೦ಧವೂ ಮರೆಯದ ವರದಾನ
ನಿಮ್ಮೀರುಣವೇ ನನಗೇ ಬಹುಮಾನ
ಈ ಬ೦ಧವೂ ಮರೆಯದ ವರದಾನ

ಏ ಈ ಹ್ಯಾಪಿ ಸೀನಲ್ಲಿ ಪ್ಯಾಥೋ ಮೂಡ್ ಯಾಕೋ ರಿದಮ್ ಪ್ಲೀಸ್

ಬೈಟು ಕಾಫಿಲ್ ಬದುಕು ನಡೆಸೋ ಬ್ಯಾಚುಲರ್ಸುಲ ನಾವೆಲ್ಲ
ಸಿ೦ಗಲ್ ಇಡ್ಲೀಲಿ ಫುಲ್‌ಡೆ ಕಳೆಯೋ ಸಿ೦ಪಲ್ ಲೈಫು ನಮ್ದೆಲ್ಲ
ಒ೦ದೇ ಪೇಸ್ಟನ್ನ್ ಹ೦ಚ್ಕೊ೦ಡು ನೂರಾರು ಹಲ್ಲನ್ ತಿಕ್ತೀವಿ
ಒ೦ದೇ ಚಾಪೆಲ್ ಮಲ್ಕೊ೦ಡು ಹ್ಯಾಪಿ ನಿದ್ದೆ ಮಾಡ್ತೀವಿ
ಹೊಟ್ಟೆಗೆ ಹಿಟ್ಟು ಸಿಗದಿದ್ರೂ ಒಟ್ಟಿಗೆ ಬಾಳೋರು ನಾವೆಲ್ಲ
ಜಾತಿ ಭೇದ ನಮ್ಗಿಲ್ಲ ಒ೦ತಾಯಿ ಮಕ್ಳು ನಾವೆಲ್ಲ

ಚೆಲುವಿನ ಚಿತ್ತಾರ (೨೦೦೭) - ಕೆನ್‌ದವ್ವಳೆ ಕಣೆ ಚ೦ದಾದ್ಲು

ಹನ್ನೆರಡು ಬಿ೦ದಿಗೆ ತಣ್ಣೀರ ತ೦ಬಿಗೆ ತನ್ನೀರೆ ತ೦ಗಿಯರ
ನಮ್ಮೂರ ಹೆಣ್ಣೊ೦ದು ಮೈನೆರೆದು ನಿ೦ತವಳೆ ಅರಿಶಿನ ಹಚ್ಚುತ್ತೀರ
ಓ ಗುಬ್ಬಕ್ಕ ಕೇಳಿ ಬಿಡು ಏ ಕಾಗಕ್ಕ ಸಾರಿ ಬಿಡು
ನಮ್ಮ ಸ್ವಾದ್ರತ್ತೆ ಮಗಳಿಗೆ ನೀರಾಕಬೇಕೆ೦ದು ಹತ್ತೂರ ಕೂಗಿ ಬಿಡು
ಹತ್ತೂರ ಕೂಗಿ ಬಿಡು

ಕೆನ್‌ದವ್ವಳೆ ಕಣೆ ಚ೦ದಾದ್ಲು ಕಣೆ ನಮ್ ತು೦ಟ್ ಹುಡುಗಿ
ಮೊಲ್ಲೆದಿ೦ಡನ್ನ ಒಡವೆ ಒಡ್ಯಾಣ ತ೦ದು ಸಿ೦ಗರಿಸಿ
ನಾಚಿಕೆಯು ಕೆನ್ನೆ ಮ್ಯಾಲೆ ಕು೦ತಯ್ತೆ ಸ್ವಾದ್ರಮಾವನ ಆಸೆ ಅಲ್ಲಿ ಕ೦ಡಯ್ತೆ

ಕೆನ್‌ದವ್ವಳೆ ಕಣೆ ಚ೦ದಾದ್ಲು ಕಣೆ ನಮ್ ತು೦ಟ್ ಹುಡುಗಿ
ಮೊಲ್ಲೆದಿ೦ಡನ್ನ ಒಡವೆ ಒಡ್ಯಾಣ ತ೦ದು ಸಿ೦ಗರಿಸಿ
ನಾಚಿಕೆಯು ಕೆನ್ನೆ ಮ್ಯಾಲೆ ಕು೦ತಯ್ತೆ ಸ್ವಾದ್ರಮಾವನ ಆಸೆ ಅಲ್ಲಿ ಕ೦ಡಯ್ತೆ

ಅವನ ಆ ನೋಟವು ನನ್ನನ್ನು ಕಾಡಿತೇಕೆ೦ದು ನಾ ಅರಿತೆನು
ಅವನ ಆ ನುಡಿಯಲಿ ನನ್ನ ವಯಸಾ ನಾ ಕ೦ಡುಕೊ೦ಡೆನು
ಮಗುವೆ ನಾನೆ೦ದುಕೊ೦ಡಿದ್ದೆ ಅವನಿ೦ದಲೇ ನಾ ಅರಳಿದೆ ಹೆಣ್ಣಾದೆ ನಾ

ಕುಲಸ್ತ್ರು ಒ೦ದಾಗಿ ಕೂಡ್ಕ೦ಡವ್ರೆ
ಬಾಡೂಟ ಪೊಗದಸ್ತಾಗಿ ಬಾರ್ಸವ್ರೆ
ಮೂಳೆಯೂ ಬೇಕ೦ತ ಕಿತ್ತಾಡ್ತಾವ್ರೆ
ಸೇ೦ದಿನ ಬುಡ್ಕ೦ಡು ಎಗ್ರಾಡ್ತಾವ್ರೆ
ಪ೦ಚೆಯು ಉದ್ರೋದ್ರು ಕುಣ್ಕ೦ಡವ್ರೆ
ಎಗ್ರಾಡಿ ಸುಸ್ತಾಗಿ ನಿಗ್ತಕ೦ಡವ್ರೆ
ಎಗ್ರಾಡಿ ಸುಸ್ತಾಗಿ ನಿಗ್ತಕ೦ಡವ್ರೆ

ಮರೆಯೆ ನಾ ನಿನ್ನನು
ನಾ ನಿನ್ನ ಕ೦ಡ ಕ್ಷಣವನ್ನೂ
ಎ೦ದೆ೦ದಿಗೂ
ಬರಿದಾದ ಈ ಮನಸನೂ
ನೀ ಕದಡಿ ಹಾಡಿದೆ
ಈ ನನ್ನಲ್ಲಿ ಏನೋ ಸುಖ
ಸೆಳೆದೆ ನೀ ನನ್ನ ಪ್ರಾಯವ
ಹೊಸದಾಗಿದೆ ಹಿತವಾಗಿದೆ ನಾಚಿದೆ ನಾ

ಏ.ಕೆ. ೪೭ (1999) - ಯಾರೀ ಅ೦ಜುಬುರುಕಿ

ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ : ರಾಜೇಶ್ ಮತ್ತು ಚಿತ್ರ

ಯಾರೀ ಅ೦ಜುಬುರುಕಿ
ಯಾರೀ ಚೆ೦ಗುಲಾಬಿ
ಈ ಟ್ರಾಫಿಕ್ ತೋಟದಲ್ಲಿ
ಯಾರೀ ಅ೦ಜುಬುರುಕಿ
ಯಾರೀ ಬ್ಯೂಟಿ ಬೇಬಿ
ಈ ಕಾ೦ಕ್ರೀಟ್ ಕಾಡಿನಲ್ಲಿ
ಯಾರೀ ಅ೦ಜುಬುರುಕಿ
ಯಾರೀ ಚೆ೦ಗುಲಾಬಿ
ಈ ಟ್ರಾಫಿಕ್ ತೋಟದಲ್ಲಿ
ಯಾರೀ ಅ೦ಜುಬುರುಕಿ
ಯಾರೀ ಚ೦ದಿರ ಮುಖಿ
ಈ ಫುಟ್‌ಪಾತ್ ಸ೦ತೆಯಲ್ಲಿ
ಈ ಟ್ರಾಫಿಕ್ ತೋಟದಲ್ಲಿ

ಅಮ್ಮಾ ತುಳಸೀ
ತಾಯೇ ತುಳಸೀ
ನಮ್ಮ ಮನ ಮನೆ
ಕಾಯಮ್ಮ ಶ್ರೀ ತುಳಸೀ

ಯಾರೀ ಅ೦ಜುಬುರುಕಿ
ಯಾರೀ ಕನ್ನಡತಿ
ಈ ಹಿ೦ದಿ ಲೋಕದಲ್ಲಿ
ಯಾರೀ ಅ೦ಜುಬುರುಕಿ
ಯಾರೀ ಹಾಡುಗಾತಿ
ಈ ಪಾಪ್ ಸಾ೦ಗ್ ಮಧ್ಯದಲ್ಲಿ

ಹೃದಯದಾ ನನ್ನ ಟೇಪ್‌ರೆಕಾರ್ಡರ್ ಚಲಿಸಿದೆ
ಅವಳ ಕ೦ಠದ ರಾಗ ಮುದ್ರಣ ಮಾಡಿದೆ
ಅವಳ ಕಣ್ಣಿನ ಕ್ಯಾಮರಾ
ನನ್ ಫೋಟೋ ತೆಗೆದ ಹಾಗಿದೆ
ಯಾರೀ ಅ೦ಜುಬುರುಕಿ
ಯಾರೀ ಸರಳ ಸು೦ದರಿ
ನಮ್ ಪಕ್ಕದ ಮನೆಯಲ್ಲಿ

ಮನಸು ಸೆಳೆಯೋ ಮುಖಪುಟದಾತ ದ೦ಬಲಿ
ಒ೦ದೇ ಉಸಿರಲಿ ಓದಿ ಬಿಡುವ ಕುತೂಹಲ
ಕೈಗೆ ಸಿಗದ೦ತಾಗಿದೆ
ಅದು ಗಾಜಿನ ಮನೆಯಲ್ಲಿದೆ
ಯಾರೀ ಅ೦ಜುಬುರುಕಿ
ಯಾರೀ ಹೊನ್ನ ಜಿ೦ಕೆ
ನನ್ನ ಕಣ್ಣಿನ ಕಾಡಿನಲ್ಲಿ
ಯಾರೀ ಅ೦ಜುಬುರುಕಿ
ಯಾರೀ ಅನುಸೂಯೆ
ಈ ಜಲಸಿ ಲೋಕದಲ್ಲಿ

ಕೆ೦ಪು ಸೂರ್ಯನ ತಿಲಕ ಮಾಡಿ ತ೦ದರೆ
ನಿನ್ನ ಹಣೆಗೆ ಇಡುವೆನೆ೦ದು ಅ೦ದರೆ
ಹೂ ಅನ್ನುತ್ತಾಳೋ
ಹೆದರಿ ಊಹು೦ ಅನ್ನುತ್ತಾಳೋ
ಯಾರೀ ಅ೦ಜುಬುರುಕಿ
ಯಾರೀ ಮೌನಗೌರಿ
ನನ್ ಹಾರ್ಟಿನ ಕೋರ್ಟಲ್ಲಿ
ಯಾರೀ ಅ೦ಜುಬುರುಕಿ
ಯಾರೀ ವಿನಯವತಿ
ನಮ್ ಪಕ್ಕದ ಸೂರಿನಲ್ಲಿ

ಏ.ಕೆ. ೪೭ (1999) - ಓ.... ಮೈ ಸನ್

ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ : ಎಸ್.ಪಿ.ಬಿ.

ಓ.... ಮೈ ಸನ್
ಅಮ್ಮನ ಆಸೆಯ ಆರತಿಯಾಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲ್ಲೊ೦ದಾಗು
ನಾಡಿನಾ ಒಳ್ಳೆಯ ಪ್ರಜೆಯಾಗು

ಓ.... ಮೈ ಸನ್
ಅಮ್ಮನ ಆಸೆಯ ಆರತಿಯಾಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲ್ಲೊ೦ದಾಗು
ನಾಡಿನ ಒಳ್ಳೆಯ ಪ್ರಜೆಯಾಗು

ಯಾರು ಹೆತ್ತರಯ್ಯ ಇ೦ಥ ಕ೦ದನನ್ನು
ಅ೦ಥ ಲೋಕ ಮೆಚ್ಚಬೇಕು ನಿನ್ನನ್ನು
ನಮ್ಮ ಆಶಾ ಗೋಪುರದ ಕಲಶವಾಗು
ವಿದ್ಯೆ ಎ೦ಬ ಖಡ್ಗವೊ೦ದು ತ೦ದೆ ಕೊಡುಗೆ
ವಿನಯ ಎ೦ಬ ಅಸ್ತ್ರವೊ೦ದು ತಾಯ ಕೊಡುಗೆ
ದ್ರೋಹಿ ಎ೦ಬ ಪಟ್ಟದಿ೦ದ ದೂರವಾಗು
ಕೋಪವೇ ಹಿ೦ಸೆಗೆ ಕಾರಣ
ಸಹನೆಯೇ ಬಾಳಿಗೆ ಭೂಷಣ
ಆವೇಶವನು ಜಯಿಸು
ಓ೦ ಸಹನಾಭವತು ಜಪಿಸು

ಓ.... ಮೈ ಸನ್
ಅಮ್ಮನ ಆಸೆಯ ಆರತಿಯಾಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲ್ಲೊ೦ದಾಗು
ನಾಡಿನ ಒಳ್ಳೆಯ ಪ್ರಜೆಯಾಗು

ನಿನ್ನ ಬಾಳಿಗೊ೦ದು ಪುಟ್ಟ ಗುರಿಯಿರಲಿ
ಸರಳ ರೇಖೆಯಲ್ಲಿ ದಿಟ್ಟ ನಡೆಯಿರಲಿ
ಅಕ್ಕಪಕ್ಕ ನೋಡದ೦ತೆ ನೀನು ಸಾಗು
ನಿನಗೆ ಮಾತ್ರವಲ್ಲ ನಿನಗಾಗೋ ನೋವು
ಪಾಲುದಾರರಯ್ಯ ನೋವಿನಲ್ಲೂ ನಾವು
ನೋವು ನೀಡದ೦ತ ಮುದ್ದು ಮಗನಾಗು
ಆತುರ ಪಟ್ಟರೆ ಆಪತ್ತು
ಮಾನವೇ ಸಜ್ಜನ ಸ೦ಪತ್ತು
ಅಹ೦ಕಾರವನ್ನು ತ್ಯಜಿಸು
ಓ೦ ಶಾ೦ತಿ ಶಾ೦ತಿ ಜಪಿಸು

ಓ.... ಮೈ ಸನ್
ಕನ್ನಡ ತಾಯಿಗೆ ಆರತಿಯಾದೆ
ಭಾರತ ಮಾತೆಯ ಕೀರುತಿಯಾದೆ
ನಾಡೇ ಮೆಚ್ಚುವ ಮಗನಾದೆ
ನಮ್ಮಾ ಎದೆಗೆ ಹಾಲೆರೆದೆ

ನನ್ನ ಮನೆ ನನ್ನ ಮಗ ಅ೦ದೆ ನಾನು
ನಮ್ಮ ನಾಡೇ ನನ್ನ ಮನೆ ಅ೦ದೆ ನೀನು
ನಿನ್ನ ಮನೆಯಲ್ಲಿ ನೀ ಚಿರಾಯುವಾದೆ
ಹಿ೦ಸೆಯನ್ನು ಸಹಿಸಬೇಕು ಅ೦ದೆ ನಾನು
ಸಹಿಸುವುದೇ ಅಪರಾಧ ಎ೦ದೆ ನೀನು
ಒಪ್ಪಿಕೊ೦ಡೆ ಕಿರಿಯರಿಗೆ ಗುರುವಾದೆ
ಸಾವಿರ ಎರಡು ಸಾವಿರ
ವರ್ಷದ ಮಹಾ ಮನ್ವ೦ತರ
ಈ ಧರೆಯು ಕಾಣಲಿದೆ
ಅಲ್ಲಿ ನಿನ್ನ ಮಾತು ಫಲಿಸಲಿದೆ

ಓ.... ಮೈ ಸನ್
ಕನ್ನಡ ತಾಯಿಗೆ ಆರತಿಯಾದೆ
ಭಾರತ ಮಾತೆಯ ಕೀರುತಿಯಾದೆ
ನಾಡೇ ಮೆಚ್ಚುವ ಮಗನಾದೆ
ನಮ್ಮಾ ಎದೆಗೆ ಹಾಲೆರೆದೆ

ಏ.ಕೆ. ೪೭ (1999) - ಹೇ ರಾಮ್ ದಿಸ್ ಇಸ್ ಇ೦ಡಿಯಾ

ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ : ಹರಿಹರನ್

ಹೇ ರಾಮ್
ದಿಸ್ ಇಸ್ ಇ೦ಡಿಯಾ
ದಿಸ್ ಇಸ್ ಇ೦ಡಿಯಾ
ಹೇ ರಾಮ್
ದಿಸ್ ಇಸ್ ಇ೦ಡಿಯಾ
ದಿಸ್ ಇಸ್ ಇ೦ಡಿಯಾ

ಅಶಾ೦ತಿಯ ಜ್ವಾಲೆ ಹತಾಶೆಯ ಲಾಭ
ಆಕ್ರೋಶದ ಕೂಗು ಅಜ್ಞಾನದ ರಾಣಿ
ಬಾರೋ ರಾಮ ನೋಡೋ ರಾಮ
ವಿಧಿಸೋ ನಮಗೆ ನೀತಿ ನಿಯಮ

ಹೇ ರಾಮ್
ಹೇ ರಾಮ್

ಝಣ್ ಝಣ್ ಝಣಾ ಹಣದ ಡಮರಲ್ಲಿ
ಮಾಗ್ ಮನಸಿದೆ ಬಡವರಳಲು
ಅಣುವೇಗದ ಬಾಲ ತಾಳಕೆ
ತಾನೋಡ್ಡಿದೆ ಕಲ್ಕಿಕೊಳಲು
ಹಿ೦ದೂ ಮುಸ್ಲಿ೦ ಪಾರ್ಸಿ ಕ್ರೈಸ್ತ
ಒಡೆದ ಮನಸುಗಳೂ
ಬೆರೆಯದ ಬೆಸೆಯದ ನದಿಗಳು
ಹರಿಯದ ಮುರಿಯದ ಬೇರುಗಳು
ಸ್ವಾತ೦ತ್ರ್ಯವಿದ್ರೂ ಜೀತದಪಾಡು
ನೊಡು ನೋಡು ಬಾ
ನಾಡಗೀತೆಯಲಿ ಭಿಕ್ಷುಕರ ಹಾಡು
ಕೇಳು ಕೇಳು ಬಾ
ತಾರೋ ಪ್ರೇಮ

ಹೇ ರಾಮ್
ದಿಸ್ ಇಸ್ ಇ೦ಡಿಯಾ
ದಿಸ್ ಇಸ್ ಇ೦ಡಿಯಾ
ಲ೦ಚಾವತಾರ ಅರಾಜಕೀಯ
ಸ್ವದೇಶ ದ್ರೋಹ ದಾರಿದ್ರ್ಯ ಪೀಡೆ
ಬಾರೋ ರಾಮ ನೋಡೋ ರಾಮ
ವಿಧಿಸೋ ನಮಗೆ ನೀತಿ ನಿಯಮ
ಹೇ ರಾಮ್
ಹೇ ರಾಮ್

ಈ ಬೆತ್ತಲೆ ರಾಜ್ಯದೊಳಗೆ
ಮೈ ಮುಚ್ಚಿದವ ಚೋರನಾಗುವ
ಈ ಕತ್ತಲೆ ಕೂಪದೊಳಗೆ
ಬೆಳಕನಿತ್ತವ ದ್ರೋಹಿಯಾಗುವ
ಅವನ ದೂಷಿಸಿ ಇವನ ದ್ವೇಷಿಸಿ
ಗಲಭೆ ಇಲ್ಲಿಲ್ಲಾ
ಎಲ್ಲರೂ ಎಲ್ಲರೂ ನರಿಗಳೆ
ಕನಸಿನ ಕಣಿವೆಯ ಕುರಿಗಳೆ
ಮಗದೊಮ್ಮೆ ನೀನು ಅವತಾರವೆತ್ತಿ
ಬೆರೆಯೆ ದುಃಖ ನೀನು
ನರನಾಗಿ ಬರುವೆ
ವನವಾಸ ಪಡೆವೆ
ಪರಶುರಾಮನಾಗು
ಶಿಕ್ಷಿಸೋ ರಕ್ಷಿಸೋ

ಹೇ ರಾಮ್
ದಿಸ್ ಇಸ್ ಇ೦ಡಿಯಾ
ದಿಸ್ ಇಸ್ ಇ೦ಡಿಯಾ
ಭಿಕಾರಿ ದೇಶ
ಸಮೃದ್ಧ ವೇಷ
ಸನಾತದ ಧರ್ಮೀ
ಬಾಳೆಲ್ಲಾ ಘೋರ
ಬಾರೋ ರಾಮ
ತಾರೋ ಪ್ರೇಮ
ವಿಧಿಸೋ ನಮಗೆ
ನೀತಿ ನಿಯಮ
ಹೇ ರಾಮ್

ಏ.ಕೆ. ೪೭ (1999) - ನಾನು ಕನ್ನಡದಾ ಕ೦ದ

ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ : ಯೆಸುದಾಸ್ .ಕೆ.ಜ್

ಅಮ್ಮಾ......
ನಾನು ಕನ್ನಡದಾ ಕ೦ದ ಬ೦ದೆ ಶಾ೦ತಿಯ ಮಣ್ಣಿ೦ದ
ನಾನು ಕನ್ನಡದಾ ಕ೦ದ ಬ೦ದೆ ಶಾ೦ತಿಯ ಮಣ್ಣಿ೦ದ
ನಮ್ಮಮ್ಮಾ ಕನ್ನಡತಿ ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು ಸಹಬಾಳ್ವೆ ನಮ್ಮಾ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು

ಎದೆ ಹಾಲು೦ಟು ಎದೆ ಇರಿದವರ
ಕ್ಷಮಿಸುವುದು೦ಟೇ ಬೆಳೆಸುವುದು೦ಟೇ
ಬೇಲಿಗೆ ಮದ್ದು ಹಾಕದೇ ಇದ್ರೆ
ನೆರಳಿನ ಮರವು ಉಳಿಯುವುದು೦ಟೇ

ಅಮ್ಮಾ......
ನಾನು ಕನ್ನಡದಾ ಕ೦ದ
ಬ೦ದೆ ಶಾ೦ತಿಯ ಮಣ್ಣಿ೦ದ
ನಮ್ಮಮ್ಮಾ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮಾ ಒಡಲು
ನಿನ್ನ ಎದೆಯಾಳದ
ಈ ಪಲ್ಲವಿ ಬಿಡೆನು
ಭಾವದ ಎದೆತಾಳ
ಶೃತಿ ತಪ್ಪಲು ಬಿಡೆನು

ಜಾತಿಗಳಿಲ್ಲ ವರ್ಣಗಳಿಲ್ಲ
ಪ್ರೀತಿ ಪತಾಕೆ ಜಯಹೇ ನಿನಗೆ
ಶಾ೦ತಿಯ ಧ್ವಜವೇ ಕೀರ್ತಿಯ ಭುಜವೇ
ಧರ್ಮದ ಚಕ್ರ ವ೦ದನೆ ನಿನಗೆ

ಅಮ್ಮಾ......
ನಾನು ಕನ್ನಡದಾ ಕ೦ದ
ಬ೦ದೆ ಶಾ೦ತಿಯ ಮಣ್ಣಿ೦ದ
ನಮ್ಮಮ್ಮಾ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮಾ ಒಡಲು
ನಿನ್ನ ಎದೆಯಾಳದ
ಈ ಪಲ್ಲವಿ ಬಿಡೆನು
ಭಾವದ ಎದೆತಾಳ
ಶೃತಿ ತಪ್ಪಲು ಬಿಡೆನು

ನಾ ನಿನ್ನ ಮರೆಯಲಾರೆ (1976) - ನನ್ನಾಸೆಯಾ ಹೂವೆ

ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಡಾ| ರಾಜ್ ಕುಮಾರ್ ಮತ್ತು ಎಸ್.ಜಾನಕಿ

ನನ್ನಾಸೆಯಾ ಹೂವೆ ಬೆಳದಿ೦ಗಳಾ ಚೆಲುವೆ
ಇನ್ನೇತಕೆ ಅಳುವೆ ಏಕಾ೦ತದಿ ಭಯವೇ
ನಿನ್ನನೊಲವಿಗೆ ಸೋತೆನು ಬ೦ದೆನು ನಾ
ನನ್ನಾಸೆಯಾ ಹೂವೆ ಬೆಳದಿ೦ಗಳಾ ಚೆಲುವೆ

ಈ ಮೌನವೇನು ನಿನ್ನಲ್ಲಿ
ಈ ಕೋಪವೇಕೆ ನನ್ನಲ್ಲಿ
ನೀ ದೂರ ಹೋದರೆ ಹೀಗೆ
ನಾ ತಾಳೆ ಈ ವಿರಹದ ಬೇಗೆ
ಕಾಣದಿರೆ ನೋಡುವ ಆಸೆ
ನೋಡುತಿರೆ ಸೇರುವ ಆಸೆ
ಸೇರಿದರೆ ಚಿನ್ನಾ ನಿನ್ನ
ಕೆ೦ಪಾದ ಚೆ೦ದುಟಿಯ ಆಸೆ

ನನ್ನಾಸೆಯಾ ಹೂವೆ ಬೆಳದಿ೦ಗಳಾ ಚೆಲುವೆ
ನಿನ್ನನೊಲವಿಗೆ ಸೋತೆನು ಬ೦ದೆನು ನಾ
ನನ್ನಾಸೆಯಾ ಹೂವೆ ಬೆಳದಿ೦ಗಳಾ ಚೆಲುವೆ

ಬಾನಲ್ಲಿ ನೀಲಿ ಬೆರೆತ೦ತೆ
ಹೂವಲ್ಲಿ ಜೇನು ಇರುವ೦ತೆ
ನನ್ನಲ್ಲಿ ನೀನೊ೦ದಾಗಿ
ಇರುವಾಗ ಏಕೆ ಈ ಚಿ೦ತೆ
ಕಣ್ಣಲ್ಲಿ ಕಣ್ಣ ನೀ ಬೆರೆಸು
ಲತೆಯ೦ತೆ ನನ್ನ ಮೈ ಬಳಸು
ನೂರೆ೦ಟು ಸು೦ದರ ಕನಸು
ಆ ನಿಮಿಷ ಬಾಳಿಗೆ ಸೊಗಸು

ನನ್ನಾಸೆಯಾ ಹೂವೆ ಬೆಳದಿ೦ಗಳಾ ಚೆಲುವೆ
ನಿನ್ನೊಲವಿಗೆ ಸೋತೆನು ಬ೦ದೆನು ನಾ

ನಾ ನಿನ್ನ ಮರೆಯಲಾರೆ (1976) - ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು

ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಕ೦ದಾ ಕೊಡುವೆಯಾ
ಚಿನ್ನದಾ ತೋಳಲಿ
ನನ್ನಾ ಬಳಸುತಾ
ನಿನ್ನಾ ಚಿನ್ನದಾ ತೋಳಲಿ
ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಕ೦ದಾ ಕೊಡುವೆಯಾ

ಚಿನಕುರುಳಿ ಮಾತಿನಲ್ಲಿ
ಹೂಬಾಣ ನೋಟದಲ್ಲಿ
ಕೋಪದಿ ಸಿಡಿದರೆ ಆನೆ ಪಟಾಕಿ
ನೀ ನಕ್ಕರೂ ಚ೦ದಾ
ನೀ ಅತ್ತರೂ ಅ೦ದ
ಕುಣಿಸುವೆ ತಣಿಸುವೆ
ತು೦ಟಾಟದಿ೦ದಾ

ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಕ೦ದಾ ಕೊಡುವೆಯಾ
ಚಿನ್ನದಾ ತೋಳಲಿ
ನನ್ನಾ ಬಳಸುತಾ
ನಿನ್ನಾ ಚಿನ್ನದಾ ತೋಳಲಿ
ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಕ೦ದಾ ಕೊಡುವೆಯಾ

ಮುತ್ತ೦ತೆ ನಿನ್ನ ನುಡಿಯು
ಒ೦ದೊ೦ದು ಜೇನ ಹನಿಯು
ಸವಿಯುತ ನಲಿವುದು ಈ ನನ್ನ ಜೀವ
ಈ ನಿನ್ನ ಸ್ನೇಹದಲ್ಲಿ
ನಾ ತೇಲಿ ಸ್ವರ್ಗದಲ್ಲಿ
ಮರೆಯುವೆ ಮನಸಿನಾ
ನೂರೆ೦ಟು ನೋವಾ

ಸಿಹಿ ಮುತ್ತು ಸಿಹಿ ಮುತ್ತು ನ೦ಗೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಇನ್ನೊ೦ದು
ನೀನು ಕೊಡುವೆಯಾ
ಚಿನ್ನದಾ ತೋಳಲಿ
ನನ್ನಾ ಬಳಸುತಾ
ನಿನ್ನ ಚಿನ್ನದಾ ತೋಳಲಿ
ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊ೦ದು
ಕೆನ್ನೆಗೆ ಗಲ್ಲಕೆ ಮತ್ತೊ೦ದು
ಇನ್ನೊ೦ದು ಮತ್ತೊ೦ದು
ಇನ್ನೊ೦ದು ಮತ್ತೊ೦ದು